*ಕೃಷ್ಣಂ ವಂದೇ ಜಗದ್ಗುರುಂ…* ವೇದಾನುದ್ಧರತೇ ಜಗನ್ನಿವಪಹತೇ ಭೂಗೋಲಮದ್ಭಿಭ್ರತೇ ದೈತ್ಯ ದಾರಯತೇ ಬಲಿಂಧಲಯತೇ ಕ್ಷತ್ರಕ್ಷಯೇ ಕುರ್ವತೇ ಪೌಲಸ್ತಂ ಜಿಯತೇ ಹಲಂಕಲಯತೇ ಕಾರುಣ್ಯ ಮಾತನ್ವತೇ ಮ್ಲೇಚ್ಛಾನ್ ಮಾರ್ದಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ || ಸಾರ: ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ (ವರಾಹಾವತಾರಿ), ಹಿರಣ್ಯಕಶಿಪುವೆಂಬ ದೈತ್ಯನನ್ನು ಸಿಗಿದ (ನರಸಿಂಹಾವತಾರಿ), ಬಲಿಯನ್ನು ಪಾತಾಳಕ್ಕೆ ತಳ್ಳಿದ (ವಾಮನಾವತಾರಿ), ಕ್ಷತ್ರಿಯರನ್ನು ಸಂಹರಿಸಿದ (ಪರಶುರಾಮಾವತಾರಿ), ರಾವಣನನ್ನು ಜಯಿಸಿದ (ರಾಮಾವತಾರಿ), ಹಲಧರ ಬಲರಾಮನ ಸಹೋದರ (ಕೃಷ್ಣಾವತಾರಿ), ಕಾರುಣ್ಯಮೂರ್ತಿ (ಬೌದ್ಧಾವತಾರಿ) ಮತ್ತು ಮ್ಲೇಚ್ಛರನ್ನು ಬಡಿದೋಡಿಸುವ (ಕಲ್ಕಿ ಅವತಾರಿ) ಕೃಷ್ಣಾ… ನಿನಗೆ ನಮಸ್ಕಾರಗಳು. ದಶಾವತಾರಗಳನ್ನು ತಳೆದು “ಯದಾ ಯದಾ ಹಿ ಧರ್ಮಸ್ಯ, ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಂ ಅಧರ್ಮಸ್ಯ, ತದಾತ್ಮಾನಾಂ ಸೃಜಾಮ್ಯಹಂ” ಎನ್ನುತ್ತಾ “ಪರಿತ್ರಾಣಾಯ ಸಾಧೂನಾಂ, ವಿನಾಶಾಯ ಚ ದುಷ್ಕೃತಾಮ್, ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” (ಎಲ್ಲಿ ಧರ್ಮಕ್ಕೆ ಗ್ಲಾನಿಯಾಗುತ್ತದೋ, ಅಧರ್ಮವು ಹೆಚ್ಚಾಗುತ್ತದೋ, ಸಾಧುಗಳ ಉದ್ಧಾರಕ್ಕಾಗಿ, ದುಷ್ಕೃತ್ಯಗಳ ವಿನಾಶದ ಮೂಲಕ ಧರ್ಮ ಸಂಸ್ಥಾಪನೆಗಾಗಿ ಯುಗ ಯುಗದಲ್ಲೂ ಅವತರಿಸುತ್ತೇನೆ) ಎಂಬ ಗೀತೋಪದೇಶಗೈದ ತುಂಟ ಬಾಲ ಕೃಷ್ಣನಿಗೆ ಇದು ...
Comments
Post a Comment